ಸಾಮಾಜಿಕ ಜಾಲತಾಣದಲ್ಲಿ ಕೊತ್ತಂಬರಿ ಸೊಪ್ಪು ಟ್ರೋಲ್ಗಳು ಸಖತ್ ವೈರಲ್ ಆಗುತ್ತಿದೆ. ಟ್ರೋಲ್ ಪೇಜ್ಗಳಲ್ಲಿ ಇದೀಗ ಕೊತ್ತಂಬರಿ ಸೊಪ್ಪಿನದ್ದೆ ಕಾರುಬಾರು. ಸಣ್ಣ ವಿಷಯ ಸಿಕ್ರೆ ಸಾಕು ಟ್ರೋಲ್ ಮಾಡಿ ಗೋಳು ಹೊಯ್ಕೊಳ್ಳುವ ಪೇಜ್ಗಳಿಗೆ ಇದೀಗ ಕೊತ್ತಂಬರಿ ಸಿಕ್ಕಿದೆ.
ಈ ಕೊತ್ತಂಬರಿ ಸೊಪ್ಪು ಟ್ರೋಲ್ ಶುರುವಾಗಿದ್ದು ಬೆಂಗಳೂರು ಗಲಭೆಯ ನಂತರ. ಬಂಧಿತನಾಗಿರುವ ಗಲಭೆಕೋರನ ತಂಗಿ ಸುವರ್ಣ ನ್ಯೂಸ್ ವರದಿಗಾರನಲ್ಲಿ ‘ನನ್ನ ಅಣ್ಣ ಅಮಾಯಕ, ಅವ ರಾತ್ರಿ ಕೊತ್ತಂಬರಿ ಸೊಪ್ಪು ತರೋಕೆ ಹೋಗಿದ್ದು. ಅವನಿಗೂ ಗಲಭೆಗೂ ಸಂಬಂಧ ಇಲ್ಲ’ ಎಂದಿದ್ದೇ ಇದಕ್ಕೆಲ್ಲ ಕಾರಣ.
ಆ ಮಹಿಳೆ ಅರ್ಧ ಕನ್ನಡ, ಅರ್ಧ ಉರ್ದುವಿನಲ್ಲಿ ಮಾತಾಡಿದ್ದೆ ಈ ಎಲ್ಲಾ ಆವಾಂತರಕ್ಕೆ ಕಾರಣವಾಗಿದ್ದು. ರಾತ್ರಿ ಒಂದು ಗಂಟೆಗೆ ಯಾರು ಕೊತ್ತಂಬರಿ ಸೊಪ್ಪು ತರೋಕೆ ಹೋಗ್ತಾರೆ ಎಂದು ಜನ ಪ್ರಶ್ನೆ ಮಾಡ್ತಿದ್ದಂತೆ, ಇತ್ತ ಟ್ರೋಲ್ ಪೇಜ್ಗಳು ಇದೇ ವಿಷಯವನ್ನು ಇಟ್ಕೊಂಡು ಮಹಿಳೆಯ ಕಾಲೆಳೆಯಲು ಶುರು ಮಾಡಿದ್ವು.
ಇದೀಗ ಈ ಕೊತ್ತಂಬರಿ ಸೊಪ್ಪು ಟ್ರೋಲ್ ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಎಂದರೆ, ಕೆಲ ದಿನಗಳ ಹಿಂದೆ ‘ಬಿನೋದ್’ ಎಂಬ ಹೆಸರಿನ ಮೇಲೆ ಮಾಡಲಾಗುತ್ತಿದ್ದ ಟ್ರೋಲ್ ಅನ್ನು ಕೊತ್ತಂನರಿ ಸೊಪ್ಪು ಮೀರಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ಎರಡೂ ಕೈಯಲ್ಲಿ ಕೊತ್ತಂಬರಿ ಸೊಪ್ಪು ಹಿಡಿದು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,