ಬಸ್ ಸೀಟ್ ವಿಷಯಕ್ಕೆ ಪ್ರಯಾಣಿಕರ ಮಧ್ಯೆ ಜಗಳ ಆಗೋದು, ಹೊಡೆದಾಟ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಬಸ್ ಸೀಟ್ಗಾಗಿ ಬಸ್ ಡ್ರೈವರ್ ಜೊತೆನೆ ಕಾಳಗಕ್ಕೆ ಇಳಿದಿದ್ದಾಳೆ ನೋಡಿ.
ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಬಸ್ ಕಾಲಿ ಇದ್ರೂ ಈ ಮಹಿಳೆ ನೇರವಾಗಿ ಹೋಗಿ ಬಸ್ ಚಾಲಕನ ಆಸನದಲ್ಲಿ ಕುಳಿತುಕೊಂಡು ಬಿಟ್ಟಿದ್ದಾಳೆ.
ಬಸ್ ಚಾಲಕ ಎಲ್ಲೋ ಹೋಗಿದ್ದವ ಬಂದು ನೋಡಿದ್ರೆ ಮಹಿಳೆ ಆತನ ಆಸನ ಆಕ್ರಮಿಸಿಕೊಂಡಿದ್ಲು. ಎದ್ದೇಳು, ಬಸ್ ಚಲಾಯಿಸ್ಬೇಕು ಅಂದ್ರೆ ಮಹಿಳೆ ಏಳಲು ಒಪ್ಪಲೇ ಇಲ್ಲ, ಬಸ್ ಡ್ರೈವರನ್ನೇ ಹಿಂದೆ ಕೂತು ಬಸ್ ಚಲಾಯಿಸು ಎಂದು ಹೇಳಿದ್ದಾಳೆ.
ಬಸ್ ಚಾಲಕ ಮತ್ತು ಮಹಿಳೆಯ ನಡುವೆ ನಡೆದ ಸಂಭಾಷಣೆ ಅನುವಾದ:
ಚಾಲಕ: ಇದು ಸೀಟ್ ನನ್ನದು, ಎದ್ದೇಳಿ, ನೀವು ಇಲ್ಲಿ ಕೂತ್ರೆ ನಾ ಹೇಗೆ ಬಸ್ ಚಲಾಯಿಸೋದು. ನಿಮ್ಗೆ ತಲೆ ಕೆಟ್ಟಿದೆಯಾ
ಮಹಿಳೆ: ನನಗೆ ಗೊತ್ತಿಲ್ಲ, ಈ ಸೀಟು ನಾನು ಕಾದಿರಿಸಿಯಾಗಿದೆ. ಬೇಕಾದ್ರೆ ನೀವೇ ಹಿಂದೆ ಹೋಗಿ ಬೇರೆ ಆಸನದಲ್ಲಿ ಗಾಡಿ ಓಡಿಸಿ. ಹಿಂದೆ ಕೂತು ಕೂಡ ಬಸ್ ಚಲಾಯಿಸಬಹುದು.
ಚಾಲಕ: ನೀನೇನು ಮೂರ್ಖಳಾ?
ಮಹಿಳೆ: ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ, ಮೂರ್ಖ ಎಂದು ಯಾಕೆ ಕರೆಯುತ್ತೀರಿ.
ಚಾಲಕ: ನೀವು ಮೊದಲ ಬಾರಿ ಬಸ್ನಲ್ಲಿ ಪ್ರಯಾಣಿಸ್ತಾ ಇರೋದ?
ಮಹಿಳೆ: ಮೊದಲ ಸಲಿ ಹೇಗೆ ಸಾಧ್ಯ, ನಮ್ಮವರ ಕೆಲಸವೇ ಬಸ್ ದು. ನನ್ನ ಗಂಡನ ಮನೆಯಲ್ಲಿ ಹತ್ತು ಬಸ್ ನಿಂತಿದೆ.
ಚಾಲಕ: ನಿಮ್ಮ ಗಂಡನ ಮನೆಯಲ್ಲಿ ಬಸ್ ಕಲ್ಲಿನ ಮೇಲೆ ನಿಂತಿದೆ ಅನ್ಸುತ್ತೆ.
ಮಹಿಳೆ: ಕಲ್ಲಿನಲ್ಲಿ ಯಾಕೆ? ಇದೇ ರೀತಿ ಚಕ್ರದಲ್ಲಿಯೇ ನಿಂತಿರೋದು. ದಪ್ಪ, ದಪ್ಪ ಚಕ್ರದಲ್ಲಿ.
ಚಾಲಕ: ಈ ಮಹಿಳೆಗೆ ನಾ ಹೇಗೆ ಅರ್ಥ ಮಾಡಿಸೋದಪ್ಪ?
ಮಹಿಳೆ: ಮಹಿಳೆಯಾದ್ರೆ ಏನು, ಮಹಿಳೆಯರನ್ನು ಕಡಿಮೆ ಅಂದಾಜು ಮಾಡಬೇಡಿ. ಹಣ ಕೊಟ್ಟು ಟಿಕೆಟ್ ಪಡೆದು ನಾನು ಈ ಸೀಟಲ್ಲಿ ಕೂತಿರೋದು.
ಚಾಲಕ: ಟಿಕೆಟ್ ಯಾರತ್ರ ತೆಗೊಂಡೆ? ನಾನು ಈಗಷ್ಟೆ ಬಂದಿದ್ದು, ಇನ್ನೂ ಬಸ್ಸನ್ನೇ ಓಡಿಸಿಲ್ಲ.
ಮಹಿಳೆ: ಹೌದು, ಕೂತಿದ್ದೇನೆ ಅಂದ್ಮೇಲೆ ಟಿಕೆಟ್ ಹಣ ಕೂಡ ಕೊಡ್ತೇನೆ.
ಅಲ್ಲೇ ಹಿಂದಿನ ಆಸನದಲ್ಲಿ ಕೂತಿದ್ದ ಮಹಿಳೆ ಮೊದಲ ಮಹಿಳೆಯಲ್ಲಿ: ಏನಾಯ್ತು?
ಮೊದಲ ಮಹಿಳೆ: ಏನಾಗ್ಬೇಕು, ನಾನು ಈ ಸೀಟ್ ಮೊದಲೇ ಕಾದಿರಿಸಿದ್ದೇನೆ, ಆದ್ರೆ ಈ ಚಾಲಕ ಈಗ ಬಂದು ನನ್ನನ್ನು ಇಲ್ಲಿಂದ ಏಳೋಕೆ ಹೇಳ್ತಾ ಇದ್ದಾನೆ.
ಚಾಲಕ ಎರಡನೇ ಮಹಿಳೆಯಲ್ಲಿ: ಈಕೆ ನನ್ನ ಸೀಟ್ ಬಿಟ್ಟು ಕೊಡ್ತಾ ಇಲ್ಲ, ನಾನು ಬಸ್ ಹೇಗೆ ಓಡಿಸ್ಲಿ?
ಎರಡನೇ ಮಹಿಳೆ : ನಿಮಗೆ ಬಸ್ ತಾನೆ ಚಲಾಯಿಸೋಕೆ ಇರೋದು, ಬಸ್ಸಲ್ಲಿ ಹಿಂದೆ ಇನ್ನೂ ಅನೇಕ ಆಸನಗಳಿವೆ. ಅದರಲ್ಲಿ ಯಾವುದ್ರಲ್ಲಾದ್ರೂ ಕೂತು ಓಡಿಸಿ.
ಚಾಲಕ: ಈಗ ನಿಮಗೆ ಹೇಗೆ ಅರ್ಥ ಮಾಡಿಸ್ಲಿ? ಹಿಂದಿನ ಸೀಟಿನಲ್ಲಿ ಕೂತು ಬಸ್ ಚಲಾಯಿಸೋಕೆ ಸಾಧ್ಯವಿಲ್ಲ.
ಮೊದಲ ಮಹಿಳೆ: ಮೊದಲ ಸೀಟ್ನಲ್ಲೇ ಕೂತು ಬಸ್ ಚಲಾಯಿಸಬೇಕು ಅಂತ ಇಲ್ಲಿ ಎಲ್ಲೂ ಬರ್ದಿಲ್ಲ. ಬಸ್ ಯಾವುದೇ ಸೀಟ್ನಲ್ಲಿ ಕೂತು ಬೇಕಾದ್ರೂ ಚಲಾಯಿಸಬಹುದು.
ಚಾಲಕ ಎರಡನೇ ಮಹಿಳೆಯಲ್ಲಿ: ಚಾಲಕನ ಸೀಟ್ನಲ್ಲಿ ಕೂತಿರುವ ಈ ಮಹಿಳೆಯ ತಲೆ ಏನಾದ್ರೂ ಕೆಟ್ಟಿದೆಯ?
ಎರಡನೇ ಮಹಿಳೆ: ಇಲ್ಲಪ್ಪ, ಆಕೆಯ ತಲೆ ಸರಿ ಇದೆ.
ಚಾಲಕ: ನನಗಂತು ನೀವಿಬ್ಬರು ಒಂದೇ ತರ ಕಾಣ್ತಿದ್ದೀರ, ನೀವು ಕೂಡ ಆಕೆಯ ಪರ ಮಾತಾಡ್ತಾ ಇದ್ದೀರ.
ಎರಡನೇ ಮಹಿಳೆ: ಯಾಕೆ ಆಕೆಪರ ಮಾತಾಡ್ಬಾರ್ದು? ಆಕೆ ನನ್ನದೇ ಗ್ರಾಮದಲ್ಲಿ ವಾಸಿಸೋದು.
ಚಾಲಕ ಮೊದಲ ಮಹಿಳೆಯಲ್ಲಿ: ಎದ್ದೇಳು ಸೀಟ್ನಿಂದ, ಬಸ್ ಹೊರಡುವ ಟೈಂ ಆಗಿದೆ, ಲೇಟ್ ಆಗ್ತಾ ಇದೆ.
ಇಬ್ಬರೂ ಮಹಿಳೆಯರು ಸೇರಿ: ನಮಗೂ ಕೂಡ ಲೇಟ್ ಆಗ್ತಾ ಇದೆ. ನೀವು ಯಾವುದಾದ್ರೂ ಬೇರೆ ಆಸನದಲ್ಲಿ ಕೂತು ಬೇಗ ಬಸ್ ಚಲಾಯಿಸಿ.
…….
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರು ಬಿದ್ದುಬಿದ್ದು ನಗ್ತಾ ಇದ್ದಾರೆ. ವೈರಲ್ ವಿಡಿಯೋ ನೋಡಿ,