ಬಿಹಾರ್ ಮುಜಾಫರ್ಪುರ್ನಲ್ಲಿ ವಿಚಿತ್ರ ಮೇಕೆ ಮರಿಯೊಂದರ ಜನನವಾಗಿದೆ. ಮೇಕೆಯೊಂದು ಏಲಿಯನ್ ರೀತಿಯ ಮರಿಗೆ ಜನ್ಮ ನೀಡಿದ್ದು, ಈ ಮರಿ ಬಾಯೊಳಗೆ ಎರಡೂ ಕಣ್ಣುಗಳನ್ನು ಹೊಂದಿದ್ದು, ಉಸಿರಾಡಲು ಮೂಗೇ ಇಲ್ಲದ ಕಾರಣ ಬಾಯಿಯಿಂದಲೇ ಉಸಿರಾಡುತ್ತಿದೆ.
ವಿಚಿತ್ರ ರೀತಿಯ ಮೇಕೆ ಮರಿಯನ್ನು ನೋಡಲು ಸ್ಥಳೀಯ ಗ್ರಾಮಗಳ ಜನ ತಂಡೋಪತಂಡವಾಗಿ ಬರುತ್ತಿದ್ದು, ಕೆಲ ಮುಗ್ದ ಜನ ಇದನ್ನು ಕೊರೋನಾ ಗುಣಪಡಿಸಲು ಭೂಮಿಗೆ ಇಳಿದ ದೇವರೆಂದು ಪೂಜೆ ಮಾಡಲು ಶುರುಮಾಡಿದ್ದಾರೆ.
ಈ ವಿಚಿತ್ರ ಮೇಕೆ ಮರಿ ಎರಡೂ ಕಣ್ಣುಗಳನ್ನು ಬಾಯಿಯ ಒಳಗೆ ಮೇಲ್ಬಾಗದಲ್ಲಿ ಹೊಂದಿದೆ. ಉಸಿರಾಡುವ ಮೂಗುಗಳೇ ಇಲ್ಲ. ಪ್ರಾಣಿ ವೈದ್ಯರ ಪ್ರಕಾರ ಮೇಕೆ ಮರಿ ‘ಸೈಕ್ಲೊಪಿಯಾ’ ಎಂಬ ವಿರಳಾತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಮೆದುಳಿನ ಎರಡು ಅರ್ಧಗೋಳಗಳು ಬೇರ್ಪಡೆಯಾಗದಿದ್ದಾಗ ಈ ರೀತಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ರೀತಿ ಹುಟ್ಟಿದ ಮರಿಗಳು ಜಾಸ್ತಿ ಸಮಯಗಳ ಕಾಲ ಬದುಕುವುದಿಲ್ಲ. ಬಾಯಿಯೊಳಗೆ ಕಣ್ಣು ಹೊಂದಿರುವ ಮೇಕೆ ಮರಿಯ ವಿಡಿಯೋ ಇಲ್ಲಿದೆ ನೋಡಿ,