ಹಿಮ ಚಿರತೆಗಳ ಜೀವನ ಶೈಲಿ ಇತರ ಚಿರತೆಗಳಿಗಿಂತ ಭಿನ್ನವಾಗಿರುತ್ತದೆ, ಅವು ಬೇಟೆಯಾಡುವುದನ್ನು ನೋಡುವುದೇ ರೋಚಕವಾಗಿರುತ್ತದೆ. ಇವುಗಳು ಒಮ್ಮೆ ತಮ್ಮ ಬೇಟೆಯ ಮೇಲೆ ಕಣ್ಣಿಟ್ಟರೆ ಸಾಕು, ಆ ಬೇಟೆ ಹಿಮ ಚಿರತೆಗಳ ಕೈಯಿಂದ ತಪ್ಪಿಸಿಕೊಳ್ಳೋದು ಬಲು ಅಪರೂಪ.
ಇದೀಗ ಹಿಮ ಚಿರತೆಯ ಬೇಟೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಶೇರ್ ಮಾಡಿರುವ ಈ ರೋಚಕ ಬೇಟೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
Snow #leopard aka ghosts of the mountains. Such strength & agility. This amazing footage by Martin Dohrn on the edge of Gobi desert in Mongolia. pic.twitter.com/6HRPyAjLCR
— Parveen Kaswan, IFS (@ParveenKaswan) August 5, 2020
ಹಿಮ ಚಿರತೆಯೊಂದು ಪ್ರಾಣಿಯೊಂದನ್ನು ಭೇಟೆಯಾಡಲು ಅಟ್ಟಾಡಿಸಿಕೊಂಡು ಹೋಗುವ ರಭಸಕ್ಕೆ ಹಿಮಚ್ಚಾದಿತ ಬಂಡೆಗಳ ಮೇಲಿಂದ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದ ಕೆಳಗೆ ಬಂಡೆಗಳ ನಡುವೆ ಚಿರತೆ ಉರುಳಿಕೊಂಡು ಹೋಗುವ ದೃಶ್ಯಗಳನ್ನು ನೋಡಿದರೆ ಮನಕಲಕುವಂತಿದೆ.
ಈ ವಿಡಿಯೋವನ್ನು ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿ ಚಿತ್ರೀಕರಿಸಲಾಗಿದೆ. ಮಾರ್ಟಿನ್ ದೊಹ್ರನ್ ಎಂಬ ವನ್ಯಜೀವಿ ಛಾಯಾಗ್ರಾಹಕನ ಕ್ಯಾಮರಾದಲ್ಲಿ ಈ ಬೇಟೆಯ ದೃಶ್ಯ ಸೆರೆಯಾಗಿದೆ. ಅವರ ‘the secret lives of snow leopards’ ಸಾಕ್ಷ್ಯಚಿತ್ರದ ತುಣುಕನ್ನು ಐಎಫ್ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಶೇರ್ ಮಾಡಿದ್ದು, ಆ ಪೂರ್ತಿ ಸಾಕ್ಷ್ಯಚಿತ್ರ ಇಲ್ಲಿದೆ ನೋಡಿ,