fbpx

ಚಿರತೆ vs ಹೆಬ್ಬಾವು, ಕಾಳಗದಲ್ಲಿ ಗೆದ್ದಿದ್ಯಾರು ನೋಡಿ (ವೈರಲ್ ವೀಡಿಯೋ)

ಚಿರತೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಾಡಿನಲ್ಲಿ ಸಂಚರಿಸುವ ವೇಳೆ ಚಿರತೆಗೆ ಹೆಬ್ಬಾವು ಕಂಡಿದೆ, ಅದರ ಮೇಲೆ ನೇರವಾಗಿ ದಾಳಿ ಮಾಡದ ಚಿರತೆ ಮೊದಲಿಗೆ ಹೆಬ್ಬಾವಿನ್ನು ಸರಿಯಾಗಿ ಗಮನಿಸಿದೆ.

ಸ್ವಲ್ಪ ಹೊತ್ತಿನ ಬಳಿಕ ಹೆಬ್ಬಾವಿನ ಮೇಲೆ ದಾಳಿ ಮಾಡಲು ಮುಂದಾದ ಚಿರತೆಯ ಮೇಲೆ ಹೆಬ್ಬಾವು ಪ್ರತಿರೋಧ ತೋರಿದೆ. ಆದರೆ ಕೊನೆಗೆ ಚಿರತೆಯು ಹೆಬ್ಬಾವಿನ ಕುತ್ತಿಗೆಯನ್ನು ಹಿಡಿದು ಎಳೆದಾಡಿದೆ. ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿದ್ದು, ಸಖತ್ ವೈರಲ್ ಆಗಿದೆ.

ಈ ಹಿಂದೆ ಹುಲಿ ಮತ್ತು ಹೆಬ್ಬಾವಿನ ವೀಡಿಯೋ ವೈರಲ್ ಆಗಿತ್ತು. ಹುಲಿ ಸಾಗುತ್ತಿದ್ದ ದಾರಿಯಲ್ಲಿ ಅಡ್ಡಲಾಗಿ ಸಿಕ್ಕ ಹೆಬ್ಬಾವಿಗೆ ಹುಲಿ ಏನೂ ತೊಂದರೆ ನೀಡದೆ ಪಕ್ಕಕ್ಕೆ ಸರಿದು ಇನ್ನೊಂದು ದಾರಿಯಲ್ಲಿ ಸಾಗಿತ್ತು. ಇದನ್ನೂ ಸುಶಾಂತ್ ನಂದಾ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಗ ಅವರೇ ಹಾಕಿರುವ ಚಿರತೆ-ಹೆಬ್ಬಾವಿನ ಕಾಳಗದ ವಿಡಿಯೊ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಚಿರತೆ-ಹೆಬ್ಬಾವಿನ ಕಾಳಗದ ವಿಡಿಯೊ ದಕ್ಷಿಣ ಆಫ್ರಿಕಾದ ಕ್ರೂಗೆರ್‌ ರಾಷ್ಟ್ರೀಯ ಉದ್ಯಾನವನದ್ದು ಎಂದು ತಿಳಿದುಬಂದಿದ್ದು, ಈ ವಿಡಿಯೋವನ್ನು 2012ರಲ್ಲಿ ಸೆರೆಹಿಡಿಯಲಾಗಿತ್ತು. ಈಗ ಮತ್ತೆ ಈ ವೀಡಿಯೋ ವೈರಲ್ ಆಗಿದೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!