fbpx

ಭಿಕ್ಷೆ ಬೇಡುತ್ತಾ ಲಾಠಿ ಸ್ಕಿಲ್ ಪ್ರದರ್ಶಿಸಿದ ಅಜ್ಜಿಗೆ ನೆಟ್ಟಿಗರು ಫಿದಾ, ವೀಡಿಯೋ ಸಖತ್ ವೈರಲ್

ಅಜ್ಜಿಯೊಬ್ಬರು ಬೀದಿಯಲ್ಲಿ ಸ್ವಯಂ ರಕ್ಷಣೆಯ ಕಲೆ ಪ್ರದರ್ಶಿಸಿ ಭಿಕ್ಷೆ ಬೇಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಪುಣೆಯ ನಿವಾಸಿಯಾಗಿರುವ ಸುಮಾರು ಎಪ್ಪತ್ತೈದು ವರ್ಷ ವಯಸ್ಸಿನ ಆಸುಪಾಸಿನ ಅಜ್ಜಿ ಹೊಟ್ಟೆಪಾಡಿಗಾಗಿ ಲೀಲಾಜಾಲವಾಗಿ ಲಾಠಿ ತಿರುಗಿಸುವ ಮೂಲಕ ತಮ್ಮ ಮಾರ್ಷಲ್ ಆರ್ಟ್ಸ್ ಕಲೆಯನ್ನು ಪ್ರದರ್ಶಿಸಿದ್ದಾರೆ

ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಅಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಬಾಲಿವುಡ್ ನಟರು ಹಾಗೂ ಸಂಘಸಂಸ್ಥೆಗಳು ಅಜ್ಜಿಯ ಸಂಸ್ಥೆಗಳು ಅಜ್ಜಿಯ ಸಹಾಯಕ್ಕೆ ಧಾವಿಸಿದ್ದಾರೆ.


ಬಾಲಿವುಡ್ ನಟ ‘ರಿತೇಶ್ ದೇಶ್‌ಮುಖ್’ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಜ್ಜಿಯ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. ಇದೀಗ ಅಜ್ಜಿಗೆ ಸಹಾಯ ಮಾಡಲು ಅನೇಕರು ಕ್ರೌಡ್ ಫಂಡಿಂಗ್ ಮಾಡಲು ಮುಂದಾಗಿದ್ದು, ಸಾಕಷ್ಟು ಹಣ ಒಟ್ಟಾಗಿದೆ. ಪುಣೆಯ ಶಿವಸೇನಾ ಕಾರ್ಯಕರ್ತರೂ ಅಜ್ಜಿಯ ಸಹಾಯಕ್ಕೆ ಧಾವಿಸಿದ್ದಾರೆ.

ಅಜ್ಜಿಗೆ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ. ಇದರ ಜೊತೆ ಯುವತಿಯರಿಗೆ ಸ್ವಯಂ ರಕ್ಷಣೆ ತರಬೇತಿ ಪಡೆಯಲು ಅಜ್ಜಿಯನ್ನು ನೇಮಿಸಲು ಮುಂದಾಗಿದ್ದಾರೆ. ಅಜ್ಜಿಯ ಲಾಠಿ ಸ್ಕಿಲ್ ಹೇಗಿದೆ ನೋಡಿ,

error: Content is protected !!