ಲಾಕ್ಡೌನ್ ಉಲ್ಲಂಘಿಸಿ ಬೈಕ್ ಸವಾರನೊಬ್ಬ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಹೈ ಸ್ಪೀಡ್ ಜಾಲಿ ರೈಡ್ ಮಾಡಿರುವ ಘಟನೆ ನಡೆದಿದೆ. ಬೈಕ್ ಚಲಾಯಿಸಿದ ಸವಾರನನ್ನು ಮುನಿಯಪ್ಪ ಎಂದು ಗುರುತಿಸಲಾಗಿದೆ.
ತನ್ನ ಯಮಹಾ 1000ಸಿಸಿಯ ಬೈಕ್ನಲ್ಲಿ ಯುವಕ ಲಾಕ್ಡೌನ್ ಉಲ್ಲಂಘಿಸಿ ಜಾಲಿ ರೈಡ್ ಹೊರಟಿದ್ದ. ಪ್ಲೈಓವರ್ ಮೇಲೆ 300ಕಿಮೀ ವೇಗದಲ್ಲಿ ಅಪಾಯಕಾರಿಯಾಗಿ ಬೈಕ್ ಚಲಾಯಿಸಿ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಮುನಿಯಪ್ಪ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ತನ್ನ Yamaha 1000 CC ಬೈಕ್ನಲ್ಲಿ ಅತಿ ವೇಗವಾಗಿ ಜಾಲಿ ರೈಡ್ ಹೋಗಿದ್ದು, ಇದನ್ನು ಗಮನಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಆತನನ್ನು ಹಿಂಬಾಲಿಸಿ ಬೈಕ್ ಸಮೇತ ಹಿಡಿದು ಕೇಸುದಾಖಲಿಸಿದ್ದಾರೆ. ವೀಡಿಯೋ ನೋಡಿ,