fbpx

Please assign a menu to the primary menu location under menu

ಟಿಕ್‌ಟಾಕ್ ನಿಷೇಧ ಮಾಡಿದ್ದಕ್ಕಾಗಿ ಗೋಳಾಡುತ್ತಿರುವ ಮಹಿಳೆ, ವೈರಲ್ ವೀಡಿಯೋ ನೋಡಿದ್ರೆ ಬಿದ್ದುಬಿದ್ದು ನಗ್ತೀರ

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಚೀನಾ ಸ್ವಾಮ್ಯದ ಈ 59 ಅಪ್ಲಿಕೇಶನ್‌ಗಳನ್ನು ಕೆಲ ದಿನಗಳ ಹಿಂದೆಯಷ್ಟೇ ಐಟಿ ಸಚಿವಾಲಯ ನಿಷೇಧಿಸಿದೆ. ಈ 59 ಆ್ಯಪ್ಗಳಲ್ಲಿ ಬಹು ಪ್ರಚಲಿತ ಟಿಕ್‌ಟಾಕ್ ಕೂಡ ಒಂದು.

ದೇಶದ ಭದ್ರತೆಗೆ ಅಪಾಯ ತಂದೊಡ್ಡಬಲ್ಲ ಕಾರಣಕ್ಕೆ ಟಿಕ್‌ಟಾಕ್ ಅನ್ನು ಕೂಡ ನೀಶೇಧ ಮಾಡಲಾಗಿದ್ದು, ಸದ್ಯ ಟಿಕ್‌ಟಾಕ್ ಅನ್ನು ಪ್ಲೇ ಸ್ಟೋರ್ ನಿಂದಲೂ ತೆಗದುಹಾಕಲಾಗಿದೆ. ಸರ್ಕಾರ ನಿಷೇಧ ಆದೇಶ ಹೊರಡಿಸುತ್ತಿದ್ದಂತೆ ಟಿಕ್‌ಟಾಕ್ ಭಾರತದ ಸರ್ವರ್‌ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಟಿಕ್‌ಟಾಕ್‌ನಲ್ಲಿ ಹೊಸ ವೀಡಿಯೋ ಮಾಡೋದು ಬಿಡಿ ಹಳೆಯ ವೀಡಿಯೋಗಳನ್ನೂ ನೋಡಲು ಅಸಾಧ್ಯವಾಗಿದೆ.

ಇದೀಗ ಈ ಬಗ್ಗೆ ಅನೇಕ ಟಿಕ್‌ಟಾಕ್ ಪ್ರೀಯರು ತಮ್ಮ ನೋವನ್ನು ಹೊರಹಾಕಿದ್ದು, ನಿಷೇಧ ಮಾಡುವ ಮೊದಲು ನಮಗೆ ತಿಳಿಸಿದ್ದರೆ ನಾವು ನಮ್ಮ ಹಳೆಯ ವೀಡಿಯೋಗಳನ್ನಾದರೂ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳುತ್ತಿದ್ದಾರೆ. ಇದೇ ಸಲುವಾಗಿ ಮಹಿಳೆಯೊಬ್ಬರು ಕಣ್ಣೀರಿಡುತ್ತಾ ವೀಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ.

‘ಬಹಳ ಕಷ್ಟ ಪಟ್ಟು ಹಲವು ವೀಡಿಯೋಗಳನ್ನು ಮಾಡಿದ್ದೆ, ಹೇಳದೆ ಕೇಳದೆ ಟಿಕ್‌ಟಾಕ್ ನಿಷೇಧ ಮಾಡಿದ್ದರಿಂದ ಈಗ ಅದ್ಯಾವುದನ್ನು ನೋಡಲು ಅಥವಾ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಗೋಳಿಡುತ್ತಾ ಮಹಿಳೆ ಕಣ್ಣೀರು ಸುರಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್‌ಗೆ ಈಡಾಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!