ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಸನ್ನಿದಾನಕ್ಕೆ ಪ್ರವೇಶ ಮಾಡಲು ಯತ್ನಿಸಿ ವ್ಯಾಪಾಕ ಆಕ್ರೋಶಕ್ಕೆ ಗುರಿಯಾಗಿದ್ದ ಮುಸ್ಲಿಂ ಯುವತಿ ರೆಹನಾ ಫಾತಿಮಾ ಮೇಲೆ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ತನ್ನ ನ’ಗ್ನ ದೇಹದ ಮೇಲೆ ತನ್ನದೇ ಮಕ್ಕಳಿಂದ ಚಿತ್ರ ಬಿಡಿಸಲು ಪ್ರೇರೇಪಿಸಿದ್ದಲ್ಲದೆ ಅದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ರೆಹಾನಾ ಫಾತಿಮಾ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.
ರೆಹನಾ ಪೋಸ್ಟ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬವರು ತಿರುವಳ್ಳ ಪೊಲೀಸ್ ಠಾಣೆಯಲ್ಲಿ ರೆಹಾನಾ ವಿರುದ್ದ ದೂರು ದಾಖಲು ಮಾಡಿದ್ದಾರೆ. ರೆಹಾನಾ ತನ್ನಿಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನ’ಗ್ನದೇಹದ ಮೇಲೆ ಚಿತ್ರ ರಚಿಸಲು ಬಳಸಿಕೊಂಡಿದ್ದಾಗಿ ಆರೋಪಿಸಿದ್ದಾರೆ.
ಅರೆನ’ಗ್ನವಾಗಿ ಬೆಡ್ ಮೇಲೆ ಮಲಗಿರುವ ರೆಹಾನಾ ದೇಹದ ಮೇಲೆ ಇಬ್ಬರು ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Watch Video: