ಇತ್ತೀಚೆಗೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಕರೋನಾ ಪರೀಕ್ಷಿಸಲು ವೈದ್ಯರು ಮತ್ತು ನರ್ಸ್ಗಳು ಮತ್ತು ಆರೋಗ್ಯ ಕಾರ್ಯಕರ್ತರು ತೆರಳಿದ್ದರು. ಇವರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಈ ವಿಚಾರ ಬೆಳಕಿಗೆ ಬಂದಂತೆ ಅನೇಕ ನಟ-ನಟಿಯರು ಸಾಮಾಜಿಕ ತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಕೊರೋನಾ ಪರೀಕ್ಷೆಗೆ ಬಂದಂತಹ ವೈದ್ಯರ ಮತ್ತು ನರ್ಸ್ಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಅದರಂತೆ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಕೂಡ ಈ ಬಗ್ಗೆ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
‘ಕೊಲ್ಲೊ ದೇವರಿಗಿಂತ ಕಾಯೋ ದೇವರು ದೊಡ್ಡೊನು‘ ಕಾಯುವ ದೇವರಿಗೆ ಸಮರಾದ ನಮ್ಮನ್ನು ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ? ಎಂದು ಸ್ಯಾಂಡಲ್ವುಡ್ ನಟ ಉಪೇಂದ್ರ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
“ ಕೊಲ್ಲೊ ದೇವರಿಗಿಂತ ಕಾಯೋ ದೇವರು ದೊಡ್ಡೊನು”
ಕಾಯುವ ದೇವರಿಗೆ ಸಮರಾದ ನಮ್ಮನ್ನು ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ ?— Upendra (@nimmaupendra) April 2, 2020