ದೇಶದಾದ್ಯಂತ ಕೊರೋನಾ ಲಾಕ್-ಡೌನ್ ಹಿನ್ನೆಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಕೊರೋನಾದಿಂದ ಪಾರಾಗಲು ಮನೆಯಿಂದ ಹೊರ ಹೋಗೋ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಆದರೂ ಅನೇಕ ಕಡೆಗಳಲ್ಲಿ ಜನರು ಇನ್ನೂ ಇದನ್ನು ಪಾಲಿಸುತ್ತಿಲ್ಲ, ಅದರಲ್ಲೂ ವಿದ್ಯಾವಂತ ಜನರೇ ಪಾಲಿಸದೇ ಇರೋದು ದುರಂತವೇ ಸರಿ.
ಕೊರೋನಾ ಹಾಟ್-ಸ್ಪಾಟ್, ದೇಶದಾದ್ಯಂತ ಕೊರೋನಾ ಹಬ್ಬಲು ಕಾರಣವಾದ ದೆಹಲಿಯಲ್ಲಿ ಇನ್ನೂ ಅನೇಕರು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ದೆಹಲಿಯ ಪಿತಾಂಪುರದಲ್ಲಿರುವ ರಿಲಯನ್ಸ್ ಮಾಲ್ ನಲ್ಲಿ ಮಹಿಳೆಯೊಬ್ಬಳು ದಾಂದಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಮಹಿಳೆ ಮಾಸ್ಕ್ ಧರಿಸದೆ ಮಾಲ್ ಗೆ ನುಗ್ಗಿದ್ದಷ್ಟೇ ಅಲ್ಲದೆ, ಮಾಲ್ ನಲ್ಲಿ ಜೋಡಿಸಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದ್ದಾಳೆ ಎಂಬುದು ಮಾಲ್ ಸಿಬ್ಬಂದಿ ಆರೋಪವಾಗಿದೆ. ತಕ್ಷಣ ಸಿಬ್ಬಂದಿ ಮಾಲ್ ನಲ್ಲಿ ಇದ್ದ ಎಲ್ಲರನ್ನು ಹೊರಕಳುಹಿಸಿ ಪೋಲೀಸರನ್ನು ಕಳುಹಿಸಿದ್ದಾರೆ. ಪೋಲೀಸರು ಬಂದರೂ ಮಹಿಳೆ ಕ್ಯಾರ್ ಎನ್ನಲಿಲ್ಲ. ಕೊನೆಗೆ ಮಹಿಳಾ ಸಿಬ್ಬಂದಿ ಆ ಮಹಿಳೆಯನ್ನು ಮಾಲ್ ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ತಾನು ಧರಿಸಿದ್ದ ಬಟ್ಟೆಯನ್ನು ಅಲ್ಲಿ ನೆರೆದಿದ್ದವರ ಮುಂದೆಯೇ ಕಿತ್ತೆಸೆದು ಅರೆ ನಗ್ನವಾಗಿ ಓಡಾಡಿದ್ದಾರೆ.
ಪೋಲೀಸರ ಮಾಹಿತಿ ಪ್ರಕಾರ, "ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಮಹಿಳೆ ಕಳೆದ ಹತ್ತು ವರ್ಷಗಳಿಂದ ಇದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಮಾಲ್ ನ ಪಕ್ಕದಲ್ಲಿಯೇ ಆಕೆಯ ಮನೆ ಇದೆ. ಆಕೆ ಮನೆಯಿಂದ ಹೊರಬಂದಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ".
"ಕೆಲದಿನಗಳ ಹಿಂದೆ ಪೆಟ್ರೋಲ್ ಪಂಪ್ ಒಂದರಲ್ಲಿಯೂ ಮಹಿಳೆ ಇದೇ ರೀತಿ ವರ್ತಿಸಿದ್ದಳು, ಆವಾಗ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆಕೆಗೆ ಯಾವುದೇ ರೀತಿಯ ಕೊರೋನಾ ಸೋಂಕು ಇಲ್ಲ, ಸದ್ಯ ಆಕೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಒಂದು ವೇಳೆ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೆ ಆಕೆಯ ಮನೆಯವರು ಆಕೆಯನ್ನು ಚಿಕಿತ್ಸೆಗೆ ದಾಖಲಿಸೋದು ಬಿಟ್ಟು ಹೊರಗಡೆ ಸುತ್ತಾಡೋಕೆ ಬಿಟ್ಟಿದ್ದೇಕೆ. ಘಟನೆಯ ನಂತರ ಸ್ವಲ್ಪ ಕಾಲ ಮಾಲ್ ಮುಚ್ಚಿ ಸ್ವಚ್ಛಗೊಳಿಸಿದ ನಂತರ ಮತ್ತೆ ಗ್ರಾಹಕರಿಗಾಗಿ ತೆರೆಯಲಾಗಿದೆ. ಮಹಿಳೆಯ ಪುಂಡಾಟಿಕೆಯ ವೀಡಿಯೋ ನೋಡಿ,